ಚಂದಿರನ ಪ್ರೀತಿ

ಕೈಗೆಟುಕದ ಆ ಚಂದಿರನೇ ಬೇಕೆನಗೆ

ನೀವೆಂದಿರಿ ಹುಚ್ಚು ಹಠ ಈ ಹೆಣ್ಣಿಗೆ ಎಂದು

ನಾನೆಂದೆ ಹುಚ್ಚು ಪ್ರೀತಿ ಎಂದು

ನೀವೆಂದಿರಿ ಬಿಟ್ಟು ಬಿಡು ಈ ಹಠತನವ

ನೀನು ಇಲ್ಲಿಯೇ ನಿಂತುಕೊಂಡು ಆಸೆ ಕಂಗಳಿಂದ

ನೋಡುತ್ತಿರು ಕಾಯುತ್ತಿರು

ಅವನ ದೃಷ್ಟಿ ಮಾತ್ರ ತಾರೆಯರ ದಂಡಿನ ಮೇಲೆ

ಹೊರತು ನಿನ್ನತ್ತ ಹೊರಳುತ್ತಿಲ್ಲವಲ್ಲ??!!

ಕಾಣಲಿಲ್ಲವೇ ನೀವು ಅವನ ಚಲನೆ ನಾ ಹೋದ ಕಡೆ

ನಿಲ್ಲುವನು ನಾ ನಿಂತ ಕಡೆ

ಸಾಕಲ್ಲವೇ ಅವನಿಗೂ ನನ್ನ ಮೇಲಿನ ಪ್ರೀತಿಯ ಪ್ರಮಾಣ

ಏ ಪೆದ್ದು ಹುಡುಗಿಯೇ… ನೆನಪಿಟ್ಟುಕೋ

ಅಮವಾಸ್ಯೆ ಬರುವುದೆಂದು

ನಿನ್ನ ಚಂದಿರ ಎಲ್ಲಿ ಅಡಗಿಹನು ಈ ದಿನದಂದು??!!

ನಿಮಗೆ ಅಮವಾಸ್ಯೆ ಮಾತ್ರ ಕಂಡಿದ್ದೇಕೆ??

ತಿಂಗಳ ಬೆಳಕಿಲ್ಲವೇ??

ಬರುವನಿ ನನಗಾಗಿ ಆ ದಿನ

ಮೈಯಲ್ಲಾ ಬೆಳ್ಳಿ ಬೆಳಕ ಚೆಲ್ಲಿ….


 

ಮುಂದುವರಿಯುವುದು ಈ ಕಥೆ

ಇದು ಒಂದು ಪುಟ್ಟ ಚಂದದ ಪ್ರಪಂಚ ಇಲ್ಲಿ ಒಂದಿಷ್ಟು ಸಂಬಂಧಗಳು, ಗೆಳೆಯರು, ಪರಿಚಿತ ಮತ್ತು ಅಪರಿಚಿತ ಮುಖಗಳು. ಬೇಕಾದಷ್ಟು ವಿಷಯಗಳು, ವಿಚಾರಗಳು, ವಿನಿಮಯ ನಡೀತಾನೇ ಇರುತ್ತದೆ. ನೋವು, ನಲಿವು, ಖುಷಿ, ಸಂಭ್ರಮ, ಇವುಗಳ ಜೊತೆಗೆ ಕಲಿಕೆ.
ಈ ಜೀವನ ಹಾದಿಯಲ್ಲಿ ಒಂದಷ್ಟು ಜನ ಬಂದರು ಹಾಗೆಯೇ ಬಿಟ್ಟು ಹೋದರೂ ಕೂಡ. ಯಾಕೆ ಈ ಪರಿಚಯ ಮತ್ತು ಅಗಲುವಿಕೆ?! ಕಾರಣವಿಲ್ಲ ಪರಿಚಯವಾಗಲು, ಆದರೆ ದೂರವಾಗಲು ಕಾರಣ ಲೆಕ್ಕವಿಲ್ಲದ್ದು.
ಜೀವನವೆಂಬ ಈ ಸಣ್ಣ ಧಾರಾವಾಹಿಯಲ್ಲಿ ಎಷ್ಟೊಂದು ಬಣ್ಣಗಳ ಚಿತ್ತಾರಗಳಿವೆ ಎಲ್ಲವೂ ಬೆರೆತು ಕಲೆತು ಒಂದು ಸಮಾನ ಬಣ್ಣವಾಗುತ್ತದೆ.
ಕೆಲವು ಸಂಬಂಧಗಳು ನೀರಿನಂತೆ ಹರಿದು ಬಂದು ನಿಂತವು, ಹೀಗೆ ನಿಂತ ನೀರನ್ನು ಕೊಚ್ಚಿಕೊಂಡು ಹೋಗುವ ನೆರೆಯೂ ಬಂದವು. ತಡೆಯಲಾಗದಷ್ಟು ನೋವು ಪಟ್ಟು ಮತ್ತೆ ನಲಿವು ಹೊಸ ನೀರಿನೊಂದಿಗೆ.
ಹಾಗೆ ನೋಡುತ್ತಾ ಹೋದರೆ ಇದು ಹೂದೋಟ. ಕಣ್ಣಿಗೆ ಅಂದವೇನೋ ಕಾಣಿಸುತ್ತದೆಯಾದರೂ, ಇಲ್ಲಿಯೂ ಕೂಡ ಸುವಾಸನೆ ಬೀರದ ಮತ್ತು ಸುಗಂಧ ಭರಿತ ಪುಷ್ಪಗಳು. ಇವುಗಳ ಜೊತೆಗೆ ಪುಟ್ಟ ಪುಟ್ಟ ಮುದ್ದು ಬಣ್ಣದ ಪರಿಮಳಯುಕ್ತ ನೋಡಲು ಚಂದವಿರುವ ಮುಳ್ಳಿನ ಕಾವಲಿರುವ ಹೂವುಗಳು.
ಇಂತಹ ಕೆಲವು ಆಕೃತಿಗಳನ್ನು ಒಳಗೊಂಡ ಜೀವನ ಒಂದು ಪಾಠಶಾಲೆ. ಕೆಲವು ಸುಲಭ ವಿಷಯ, ಇನ್ನು ಕೆಲವು ಕ್ಲಿಷ್ಟಕರ, ಅರ್ಥವಾಗದಿದ್ದರೂ, ಅಗತ್ಯವಾದ ಮತ್ತು ತಪ್ಪನ್ನು ತಿದ್ದಿ ಹೊಸ ಪಾಠ ಕಲಿಸುವ ದೊಡ್ಡ ಜ್ಞಾನ ಭಂಡಾರ ಜೀವನ.
ಇಷ್ಟೆಲ್ಲರದ ನಡುವೆ ತನಗೆ ಬೇಕಾದ್ದು ಏನು ಎಂದು ತಿಳಿದುಕೊಳ್ಳುವ ತುರಾತುರಿ, ತುಡಿತ, ಜಿಗುಪ್ಸೆ. ನಾನಲ್ಲದ ನನ್ನನ್ನು ಹುಡುಕುವುದು. ಈ ಭ್ರಮೆಯ ಸತ್ಯ ಅರಿವಾದಾಗ ಆಗುವ ಬೇಸರ, ದುಃಖ, ನೋವಿನೊಂದಿಗೆ ನಾನ್ಯಾರು?! ನನಗೇನು ಬೇಕು?! ಎನ್ನುವ ಹೊಸಾ ಹುಡುಕಾಟ.
ಜೀವನ, ಬದುಕು ಎನ್ನುವುದು ಸಂಘಷ೯ಗಳ ಜೊತೆಗೆ ಯಾಂತ್ರಿಕ ಚಲನೆ.
ಮುಂದುವರಿಯುವುದು ಈ ಕಥೆ ” ಜೀವನ ಉಸಿರು ನಿಲ್ಲುವ ತನಕ “.

ಚಂದಿರನ ಪ್ರೀತಿ

ಕೈಗೆಟುಕದ ಆ ಚಂದಿರನೇ ಬೇಕೆನಗೆ

ನೀವೆಂದಿರಿ ಹುಚ್ಚು ಹಠ ಈ ಹೆಣ್ಣಿಗೆ ಎಂದು

ನಾನೆಂದೆ ಹುಚ್ಚು ಪ್ರೀತಿ ಎಂದು

ನೀವೆಂದಿರಿ ಬಿಟ್ಟು ಬಿಡು ಈ ಹಠತನವ

 

ನೀನು ಇಲ್ಲಿಯೇ ನಿಂತುಕೊಂಡು ಆಸೆ ಕಂಗಳಿಂದ

ನೋಡುತ್ತಿರು ಕಾಯುತ್ತಿರು

ಅವನ ದೃಷ್ಟಿ ಮಾತ್ರ ತಾರೆಯರ ದಂಡಿನ ಮೇಲೆ

ಹೊರತು ನಿನ್ನತ್ತ ಹೊರಳುತ್ತಿಲ್ಲವಲ್ಲ??!!

ಕಾಣಲಿಲ್ಲವೇ ನೀವು ಅವನ ಚಲನೆ ನಾ ಹೋದ ಕಡೆ

ನಿಲ್ಲುವನು ನಾ ನಿಂತ ಕಡೆ

ಸಾಕಲ್ಲವೇ ಅವನಿಗೂ ನನ್ನ ಮೇಲಿನ ಪ್ರೀತಿಯ ಪ್ರಮಾಣ

 

ಏ ಪೆದ್ದು ಹುಡುಗಿಯೇ… ನೆನಪಿಟ್ಟುಕೋ

ಅಮವಾಸ್ಯೆ ಬರುವುದೆಂದು

ನಿನ್ನ ಚಂದಿರ ಎಲ್ಲಿ ಅಡಗಿಹನು ಈ ದಿನದಂದು??!!

ನಿಮಗೆ ಅಮವಾಸ್ಯೆ ಮಾತ್ರ ಕಂಡಿದ್ದೇಕೆ??

ತಿಂಗಳ ಬೆಳಕಿಲ್ಲವೇ??

ಬರುವನು ನನಗಾಗಿ ಆ ದಿನ

ಮೈಯಲ್ಲಾ ಬೆಳ್ಳಿ ಬೆಳಕ ಚೆಲ್ಲಿ….

ನಿ(ನೀ)ನಾದ

ನನ್ನ ಅಂತರಂಗ ನೀನು
ನಾನರಿಯದ ನನ್ನೊಳಗಿನ
ಧ್ವನಿ ನೀನು
ಪುಟ್ಟದೊಂದು ಆಸೆಯೂ ನೀನು
ನಿರಾಸೆಯೂ ನೀನು
ಅದೇನೋ ಹೇಳಿಕೊಳ್ಳಲಾಗದ
ಸುಪ್ತ ಮನಸಿನ ಸಂಕಟ ನೀನು
ನನ್ನ ಒಲವಿನ ಭಾಷೆಯೂ ನೀನು
ಬರಿಯ ನೀನು ಎನ್ನುವ
ನನ್ನ ನಿ(ನೀ)ನಾದ ನೀನು

ಮೌನ ಪಯಣ

ಜಾತ್ರೆ ಮುಗಿದ ನೀರವ ಮೌನ
ಒಂದು ಸುದೀರ್ಘ ಪಯಣ
ನಡೆವ ಹಾದಿಯ ಅರಿವಿಲ್ಲ
ಹಾದಿಯ ಗುರಿಯ ಸುಳಿವಿಲ್ಲ
ಗುರಿಯ ತಲುಪುವ ತವಕವೂ ಇಲ್ಲ
ಜೀವನ ಒಂದು ನಿರ್ಜೀವ ಪ್ರಯಾಣ